Saturday, September 15, 2007

Patra

ಚಿಕ್ಕವಳಿದ್ದಾಗಿನಿಂದಾನೂ ಪತ್ರ ಬರೆಯೋದು ಅಂದ್ರೆ ನನಗೆ ಬಹಳ ಖುಷಿ. ನನ್ನ ಕೆಲವು ಕಸಿನ್ಸ್ ಮತ್ತೆ ಸ್ನೇಹಿತರಿಗೆ ನಿಯಮಿತವಾಗಿ ಆಗಿ ಪತ್ರ ಬರೀತಿದ್ದೆ. ಒಮ್ಮೊಮ್ಮೆ ಹಾಗೆ ಬರೆಯದವರಿಗೂ ಬರೆದು ಅವರನ್ನು ಚಕಿತಗೊಳಿಸಿ, 'ಹೇ, ನಿನ್ನ ಕಾಗದ ನೋಡಿ ತುಂಬಾ ಖುಷಿ ಆಯ್ತು' ಅಂದಾಗ ನನಗೂ ಸಖತ್ ಖುಷಿ ಆಗ್ತಿತ್ತು. 'ಕಾಗದ ಓದೋಣ' ಅನ್ನಿಸೋ ಹಾಗೆ ಬರೆಯೋದು ನನಗೆ ಸಾಧ್ಯವಾಗ್ತಿತ್ತು, ಖುಷಿ ಕೊಡ್ತಿತ್ತು.


ನಮ್ಮ ಬೀದಿಗೆಲ್ಲಾ ಇದ್ದದ್ದು ಒಂದೇ ಟೆಲಿಫೋನ್, ನಮ್ಮ ಪಕ್ಕದ ಮನೆಯಲ್ಲಿ. ತೀರ ತುರ್ತಿನ ಸಮಯದಲ್ಲಿ ಅಲ್ಲಿಗೆ ಕರೆ ಬರುವುದಿತ್ತು. ಕರೆ ಬಂದಾಗ ಹಿಂಜರಿಕೆಯಿಂದಲೇ ಹೋಗುತ್ತಿದ್ದದ್ದು ನೆನಪಿದೆ. ಮತ್ತೊಂದೆರಡು ವರುಷ ಕಳೆಯುವಷ್ಟರಲ್ಲಿ ನಮ್ಮೆಲ್ಲರ ಮನೆಯಲ್ಲೂ ಫೋನ್. ಈಗ ಬಿಡಿ, ಕೈಗೊಂದು ಸೆಲ್ ಮಾಮೂಲು. 'ಅಮ್ಮ browsing center ಗೆ ಹೋಗಿ ಬರ್ತೀನಿ' ಅಂತ ಹೊರಡುತ್ತಿದ್ದ ದಿನಗಳು ಈಗ ದೂರ. ಈಗ ನಾನು ನಮ್ಮ ಮನೆಯಲ್ಲೇ ಕೂತು ಬ್ಲಾಗ್ ಬರೀತೀನಿ. ಇದೆಲ್ಲದರ ನಡುವೆ ಮೂಲೆಗುಂಪಾಗಿದ್ದು ನನ್ನ 'ಪತ್ರ ಬರವಣಿಗೆ'. ದಿನಾ ಫೋನ್ನಲ್ಲಿ, ಮೈಲ್‍ನಲ್ಲಿ ವಿಚಾರ ವಿನಿಮಯವಾದ ನಂತರ ಪತ್ರ ಬರೆಯುವ ಅವಶ್ಯಕತೆ ತಾನೆ ಎಲ್ಲಿದೆ?


ಈಗ ಕೆಲವು ತಿಂಗಳುಗಳ ಹಿಂದೆ 'ವಿಜಯ ಕರ್ನಾಟಕ' ಪತ್ರಿಕೆಯ ಮೈಸೂರು ಆವೃತ್ತಿಯಲ್ಲಿ 'ರೂಪಕ' ಎಂಬ ಅಂಕಣ ಪ್ರಾರಂಭವಾಯಿತು. ಯಾವುದೇ ನಿರ್ಬಂಧವಿಲ್ಲದೆ (ವಸ್ತು, ವಿಷಯ, ಅಳತೆ ಇತ್ಯಾದಿ) ಬರೆಯಬಹುದಾಗಿತ್ತು. ಹೀಗೆ ನನ್ನ ಮೊದಲ ಲೇಖನ 'ಪಪ್ಪಿ' ೨ನೇ ಮೇ ೨೦೦೭ರಲ್ಲಿ ಪ್ರಕಟವಾಯಿತು. ಮೊದಲ ಪ್ರಯತ್ನವೇ ಫಲ ಕೊಟ್ಟದ್ದು ಬಹಳ ಖುಷಿ ತಂದಿದೆ, ನಿರಂತರವಾಗಿ ಬರೆಯುವ ಪ್ರಯತ್ನದಲ್ಲಿದ್ದೇನೆ. ಹಿಂದೆ ಪತ್ರ ಬರೆಯುವಾಗ ಸಿಗುತ್ತಿದ್ದ ಖುಷಿ ಮತ್ತೆ ಸಿಕ್ಕಿದೆ. thank you vijaya karnataka


ಮತ್ತೊಂದು ವಿಶೇಷ, 'advancement in communication' ನಿಂದ ಳೆದುಹೋಗಿದ್ದ ನನ್ನ ಪತ್ರ ಬರೆಯುವ ಖುಷಿ ನನಗೆ ಮತ್ತೆ ಅದರಿಂದಲೇ (ಅಂತರ್ಜಾಲ) ಸಿಕ್ಕಿದ್ದು!! thanks to you too:-)

4 comments:

MUNNY said...

Thanks to VIJAYAKARNATAKA for one more thing..........MAKING YOU COMPUTER FRIENDLY(ha ha)

Archu said...

ಬಹಳ ಸುಂದರವಾದ ಬ್ಲೋಗ್ ಇದು. ಬರವಣಿಗೆಯ ಶೈಲಿ ಚೆನ್ನಾಗಿದೆ.

Archu said...
This comment has been removed by the author.
Archu said...

ondu salahe: tale barahavannu kannadada lipiyalli bareyabahude?